ಹಾರಿಕ ಮಂಜುನಾಥ್ ಅವರು ಶ್ರೀ ಮಂಜುನಾಥ್ ಮತ್ತು ಶ್ರೀಮತಿ ರುಕ್ಮಿಣಿ ಇವರ ಪುತ್ರಿ.
ಅವರು ಸಾಂಸ್ಕೃತಿಕ ನಗರಿಯಾದ ಬೆಂಗಳೂರು ನಗರದಲ್ಲಿ ಜನಿಸಿ ಬೆಳೆದವರು.
ಪ್ರಸ್ತುತ ಅವರು ಬಿಎ ಪ್ರಥಮ ವರ್ಷದ ವಿದ್ಯಾರ್ಥಿನಿ.
ಅವರು ಪ್ರಸಿದ್ಧ ಆಂಗ್ಲ ಕೃತಿಗಳಾದ “ ಭಾರತ ವೈಭವಂ ”, “ಉಪನಿಷದ್ ವೇ – ಭಾಗ ೧: ಈಶೋಪನಿಷತ್” ಮತ್ತು “ಉಪನಿಷದ್ ವೇ – ಭಾಗ ೨: ಕಠೋಪನಿಷತ್” ಪುಸ್ತಕಗಳ ಲೇಖಕಿ.
ಕ್ಯಾಶ್ ಲೇಸ್ ಜಾಗೃತಿ ಕಾರ್ಯಕ್ರಮದಿಂದ ಚಿರಪರಿಚಿತರು.
ಸ್ವತಃ 2016 ಡಿಸೆಂಬರ್ ನಲ್ಲಿ ಮೋದಿಜೀ ಅವರೆ ಇವರ ಸಾಧನೆ ಕಂಡು ಮೆಚ್ಚುಗೆ ವ್ಯಕ್ತಪಡಿಸಿದ್ದಾಗ ದೇಶಕ್ಕೆ ಚಿರಪರಿಚಿತರಾದರು
ಅವರು ಬಹುಭಾಷಾ ವಕ್ತಾರೆಯಾಗಿದ್ದು, ಕನ್ನಡ, ಹಿಂದಿ, ಇಂಗ್ಲಿಷ್ ಮತ್ತು ತೆಲುಗು ಭಾಷೆಗಳಲ್ಲಿ ಉಪನ್ಯಾಸ ನೀಡುತ್ತಾರೆ.
ಅವರು ಕೇರಳ, ತಮಿಳುನಾಡು, ದೆಹಲಿ, ಮಹಾರಾಷ್ಟ್ರ ಮತ್ತು ಆಂಧ್ರ ಪ್ರದೇಶ ಸಹಿತ ಭಾರತದೆಲ್ಲೆಡೆ ತಮ್ಮ ಉಪನ್ಯಾಸಗಳನ್ನು ನೀಡಿದ್ದಾರೆ.
ಅವರು ಭರತನಾಟ್ಯ ಕಲಾವಿದೆ, ಜೊತೆಗೆ ಖ್ಯಾತ ಯೋಗ ಪಟು.
ಕನ್ನಡ ಪತ್ರಿಕೆಗಳು, ಇಂಗ್ಗೀಷ್ ಪತ್ರಿಕೆಗಳು, ಹಾಗೂ ಮರಾಠಿ ಪತ್ರಿಕೆಗಳಲ್ಲಿ ಹೀಗೆ ಅನೇಕ ಪತ್ರಿಕೆಗಳಲ್ಲಿ ಇವರ ಸಾಧನೆ ಬಗ್ಗೆ ವಿವರಿಸಿದರೇ.
* ಇವರ ಸಾಧನೆಗಳನ್ನು ಕಂಡು ಈಗಿನ ಮಾನ್ಯ ಹಣಕಾಸು ಸಚಿವರಾದ ನಿರ್ಮಲ ಸೀತರಾಮನ್ ಅವರು ಸ್ವತಃ ಇವರನ್ನು ಬೇಟಿಯಾಗಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಪ್ರಶಸ್ತಿ ಮತ್ತು ಗೌರವಗಳು
ಧರ್ಮ ಸಂಸ್ಕೃತಿ ಪ್ರಸಾರಿಣಿ ಪ್ರಶಸ್ತಿ
ಯುವ ಪ್ರೇರಣಾ ಪ್ರಶಸ್ತಿ (2024–25) – ದಿಶಾ ಭಾರತ್ ವತಿಯಿಂದ
ನಾದಪ್ರಭು ಕೆಂಪೇಗೌಡ ಪ್ರಶಸ್ತಿ (2023) – ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವತಿಯಿಂದ
ಫೀಲ್ಡ್ ಮಾರ್ಷಲ್ ಕೆ.ಎಂ. ಕಾರಿಯಪ್ಪ ಪ್ರಶಸ್ತಿ – ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದ (ರಿ) ವತಿಯಿಂದ
ಯುವ ನಕ್ಷತ್ರ ಪ್ರಶಸ್ತಿ
ವಾರ್ತೂರು ಶ್ರೀ ಪ್ರಶಸ್ತಿ
ರಾಜ್ಯದ “ಆಶಾಕಿರಣ” ಪ್ರಶಸ್ತಿ
ಯುವ ರತ್ನ – ವಾಯ್ಸ್ ಆಫ್ ನೇಷನ್ ವತಿಯಿಂದ
ರೋಟರಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿ (2022) – ರೋಟರಿ ಕ್ಲಬ್ ಮೈಸೂರು ವತಿಯಿಂದ
ರೋಟರಿ ಯಂಗ್ ಅಚೀವರ್ಸ್ ಪ್ರಶಸ್ತಿ (2024–25) – ರೋಟರಿ ಕ್ಲಬ್ ಬೆಂಗಳೂರು ವತಿಯಿಂದ
ಉಪನ್ಯಾಸ ವಿಷಯಗಳು
ವೇದದಲ್ಲಿ ಶಿವ
ಉಪನಿಷತ್ಗಳಲ್ಲಿ ಶಿವ
ವಚನ – ವೇದ: ಶರಣ ಪರಂಪರೆ ಮತ್ತು ವೈದಿಕ ಸಂಸ್ಕೃತಿ
ರಾಮಾಯಣ: ಶ್ರೀರಾಮರ ಜೀವನ ತತ್ತ್ವ
ಮಹಾಭಾರತ: ಶ್ರೀಕೃಷ್ಣರ ಧರ್ಮ ಯುದ್ಧ
ಶ್ರೀಮದ್ ಭಾಗವತ: ದಶಾವತಾರ ತತ್ತ್ವ
ವಿಷ್ಣು ಪುರಾಣ: ವಿಶ್ವದ ಕಾರ್ಯ ತತ್ತ್ವ
ಭಗವದ್ಗೀತೆ: ಜೀವನದ ಯೋಗಮಾರ್ಗ
ವಿಷ್ಣು ಸಹಸ್ರನಾಮ: ನಾಮಸ್ಮರಣೆಯ ಶಕ್ತಿ
ದೇವಿ ಭಾಗವತ: ದೇವಿಯ ಆಧ್ಯಾತ್ಮಿಕ ಶಕ್ತಿ ಮತ್ತು ಸ್ತ್ರೀ ತತ್ತ್ವ
ಪ್ರತಿ ವಿಷಯವನ್ನು ಸಂದರ್ಭದ ಆವಶ್ಯಕತೆಯ ಪ್ರಕಾರ ಏಕದಿನ, ಮೂರು ದಿನ ಅಥವಾ ಏಳು ದಿನಗಳ ಉಪನ್ಯಾಸ ರೂಪದಲ್ಲಿ
ಹಾರಿಕ ಮಂಜುನಾಥ್ ಅವರು ನಿರ್ವಹಿಸುತ್ತಾರೆ.
ಉಪನಿಷತ್ ಉದ್ಗಾರ (3 ಅಥವಾ 7 ದಿನಗಳ ಉಪನ್ಯಾಸ)
ಈಶ ಉಪನಿಷತ್
ಕಾಠಕೋಪನಿಷತ್
ತಲವಕಾರ ಉಪನಿಷತ್
ಅಥರ್ವಣೋಪನಿಷತ್
ಷಡ್ಪ್ರಶ್ನೋಪನಿಷತ್
ಮಂಡುಕ್ಯೋಪನಿಷತ್
ಒಂದು ಗಂಟೆಯ ಉಪನ್ಯಾಸಗಳು (One-hour Sessions)
ಕನ್ನಡ ನುಡಿ ಸೇವೆ
ವಿದ್ಯಾರ್ಥಿಗಳಿಗಾಗಿ ಪ್ರೇರಣಾದಾಯಕ ಸಭೆ
ಮೋದಿ ಉತ್ಸವ: ರಾಷ್ಟ್ರದ ಗೌರವಾನ್ವಿತ ಪ್ರಧಾನ ಮಂತ್ರಿಯಾಗಿ ಮೋದಿಜೀಯವರ ಕೊಡುಗೆ ಕುರಿತು ಉಪನ್ಯಾಸ.
ಧರ್ಮ ಮತ್ತು ಸಂಸ್ಕೃತಿ
ರಾಷ್ಟ್ರ ಜಾಗೃತಿ
ಸನಾತನ ಧರ್ಮ ಪ್ರಭಾತ
ಪ್ರಕಾಶನ
Upanishad Way – ಭಾಗ ೧: ಈಶೋಪನಿಷತ್Upanishad Way – ಭಾಗ ೨: ಕಥೋಪನಿಷತ್Bhārata Vaibhavam – ಭಾರತ ವೈಭವಮ್ವಿಕ್ರಮ ವಾರಪತ್ರಿಕೆಯಲ್ಲಿ ಲೇಖನ
English article on Metapsychosis:
The Silence is Speaking
📰 ಪತ್ರಿಕಾ ಪ್ರಕಟಣೆಗಳು
ಹಾರಿಕ ಮಂಜುನಾಥ್ ಅವರ ಉಪನ್ಯಾಸಗಳು ಮತ್ತು ಕೃತಿಗಳ ಕುರಿತು ಪ್ರಕಟವಾದ ಲೇಖನಗಳು ಮತ್ತು ಪತ್ರಿಕೆ ವರದಿಗಳು